(ಜನನ : ೧೯, ಜೂನ್, ೨೦೦೧) ಭಾರತೀಯ ಟೆಲಿವಿಶನ್ ಕ್ಷೇತ್ರದಲ್ಲಿ, ಪ್ರಸ್ತುತಪಡಿಸಲಾಗುತ್ತಿರುವ 'ರಿಯಾಲಿಟಿ ಶೋ'ಗಳಲ್ಲಿ ಮಿಂಚುತ್ತಿರುವ ಬಾಲ-ಕಲಾಕಾರರಲ್ಲಿ ಹೆಚ್ಚು ಕಲಾಪ್ರೌಢಿಮೆ ಮತ್ತು ಉತ್ಸಾಹಗಳನ್ನು ಪ್ರದರ್ಶಿಸುತ್ತಿರುವ, ಹಾಗೂ ಎಲ್ಲರ ಬಾಯಿನಲ್ಲೂ ’ಗಂಗೂಬಾಯ್’ ಎಂದು ಪ್ರಸಿದ್ಧಳಾಗಿರುವ ೮ ವರ್ಷ ವಯಸ್ಸಿನ ಪುಣೆಯ ಹುಡುಗಿ, 'ಸಲೋನಿ' ದಿನದಿಂದ ದಿನಕ್ಕೆ ತನ್ನ ನಟನೆಯಿಂದ ಪ್ರೇಕ್ಷಕರೆಲ್ಲರ ಮನಸ್ಸನ್ನು ಜಯಿಸಿದ್ದಾಳೆ. ಸಲೊನಿ,ಪುಣೆಯ, ಸೇಂಟ್ ಹೆಲೆನಾ ಹೈಸ್ಕೂಲ್ ನಿಂದ ಮುಂಬೈಗೆ ಬಂದ ಕಲಾವಿದೆ. == ಗ್ರಾಮೀಣ ಮರಾಠಿ-ಹೆಂಗಸೊಬ್ಬಳ ಪಾತ್ರವನ್ನು (ಗಂಗೂ ಬಾಯಿ) ಅತ್ಯಂತ ಯಶಸ್ವಿಗೊಳಿಸಿದಳು == ಸಲೋನಿ, ಗಂಗೂ ಬಾಯಿ ಭಾರತದ ಒಬ್ಬ ಅತಿ ಚಿಕ್ಕವಯಸ್ಸಿನ ನಟಿ. ಬಹುಶಃ ದೂರದರ್ಶನ ವಲಯದಲ್ಲಿ ಇದುವರೆಗೆ ಇಷ್ಟು ಚಿಕ್ಕವಯಸ್ಸಿನ ತಾರೆ ಬಂದೇ ಇರಲಿಲ್ಲ. ೨೦೦೯ ರ ಕಲರ್ಸ್ ವಾಹಿನಿಯವರು ಪ್ರಸ್ತುತಪಡಿಸಿದ, ಕಾಮೆಡಿ ರಿಯಾಲಿಟಿ-ಶೋ, ಛೋಟೆ ಮಿಯ, ಬಡೆ ಮಿಯಾದಲ್ಲಿ ಭಾಗವಹಿಸಿದ ಅತ್ಯಂತ ಕಿರಿಯ ಕಲಾವಿದೆಯೆಂದು ಹೆಸರುಪಡೆದಿದ್ದಾಳೆ. ಜೂನ್ ೨೧, ೨೦೦೯ರಲ್ಲಿ, ಇವಳ ಹಾಗೂ ರಾಜೀವ್ ಠಾಕುರ್ ಇವರಿಬ್ಬರ ಜೋಡಿಯನ್ನು, ’ಛೋಟೆ ಮಿಯ, ಬಡೆ ಮಿಯಾ’ ಬಹುಮಾನಕ್ಕೆ ಹಕ್ಕುದಾರರೆಂದು ಘೋಷಿಸಲಾಯಿತು. ೩ ನೇ ವಯಸ್ಸಿನಲ್ಲಿದ್ದಾಗಲೇ ಮರಾಠಿ ಹಿಂದಿ ಚಿತ್ರಗಳಲ್ಲಿ ನಟನೆಯ ಪ್ರಾರಂಭವಾಗಿತ್ತು. ಕ್ಯಾಮರಾಕ್ಕೆ ಭಂಗಿಗಳನ್ನು ನೀಡಲು ಅರಿತಿದ್ದಳು. ’ಡಿಸ್ನಿ-ಫಿಲ್ಮ್ಸ್'ಗೆ ಒಂದು ಮ್ಯೂಸಿಕ್ ಆಲ್ಬಂನನ್ನು ತಯಾರಿಸಿಕೊಟ್ಟಿದ್ದಾಳೆ. ರಾಜಕಾರಣಿಗಳನ್ನು ಮತ್ತು ಚಲನಚಿತ್ರ ನಟ-ನಟಿಯರ ಹಾವಭಾವಗಳನ್ನು ನಕಲುಮಾಡಿ ತೋರಿಸುವ ಕಲೆ ಕರಗತವಾಗಿದೆ. == ’ಕ್ಯಾ ಆಪ್ ಪಾಂಚ್ವಿ ಪಾಸ್ ಸೆ ತೇಜ್ ಹೈ’ ಪ್ರೊಮೊಸ್ ನಲ್ಲಿ ಪಾಲ್ಗೊಂಡಿದ್ದಾಳೆ == ಶಾರೂಖ್ ಖಾನರ, ’ಕ್ಯಾ ಆಪ್ ಪಾಂಚ್ವಿ ಪಾಸ್ ಸೆ ತೇಜ್ ಹೈ’ ಪ್ರೊಮೊಸ್ ನಲ್ಲಿ ಭಾಗವಹಿಸಿ ಎಲ್ಲರ ಮನ್ನಣೆಗಳಿಸಿದಳು. ಅಪಾರ ಜ್ಞಾಪಕ ಶಕ್ತಿಯನ್ನು ಸಲೋನಿ ಹೊಂದಿದ್ದಾಳೆ. ಯಾವುದೇ ಭಾಷೆಯ ದೂರದರ್ಶನದ ಧಾರಾವಾಹಿಗಳಲ್ಲಿ ನಟಿಸಲು ಸಲೋನಿ ಇಚ್ಛಿಸುವುದಿಲ್ಲ. ಬಹಳಷ್ಟು ಸಮಯ ವ್ಯಯವಾಗುವುದರಿಂದ, ಹೆಚ್ಚಾಗಿ 'ರಿಯಾಲಿಟಿ ಶೋ' ಅಥವಾ 'ಚಲನಚಿತ್ರ'ಗಳಲ್ಲಿ ಪಾತ್ರವಹಿಸಲು ಇಷ್ಟಪಡುತ್ತಾಳೆ. == 'ನೋ ಪ್ರಾಬ್ಲೆಮ್'ನಲ್ಲಿ ಒಂದು ಪುಟ್ಟಪಾತ್ರ == ಇತ್ತೀಚೆಗೆ ದಕ್ಷಿಣ ಆಫ್ರಿಕದಲ್ಲಿ ಚಿತ್ರೀಕರಣಗೊಂಡ, ಅನೀಸ್ ಬಝ್ಮಿಯವರ ಚಿತ್ರ,'ನೋ ಪ್ರಾಬ್ಲೆಮ್,' ನಲ್ಲಿ ಒಂದು ಪುಟ್ಟಪಾತ್ರದಲ್ಲಿ ಕಾಣಿಸಿಕೊಂಡಿದ್ದಾಳೆ. ಪ್ರಿಯಾಂಕ ಛೋಪ್ರ, ಹೃತಿಕ್ ರೋಶನ್, ಸೋನಿಯ ಗಾಂಧಿ, ಹೇಮಾ ಮಾಲಿನಿ, ಮಿಥುನ್ ಚಕ್ರವರ್ತಿ ಮುಂತಾದವರನ್ನು ಇಷ್ಟ.ಪಡುತ್ತಾಳೆ. ಸಲೋನಿಗೆ ಪ್ರಾಣಿಗಳನ್ನು ಕಂಡರೆ ಪ್ರೀತಿ. ಅವಳ ಮುದ್ದಿನ ನಾಯಿ ಸರಾ ಮನೆಯಲ್ಲಿದೆ. ಅದಕ್ಕಾಗಿ ಅವಳು 'ವೆಟರ್ನೆರಿ ಡಾಕ್ಟರ್' ಆಗ ಬಯಸುತ್ತಾಳೆ. ಸಲೋನಿಯ ತಾಯಿ ಡಾ. ಸಂಯೋಗಿತ ಮುಂಬೈನಲ್ಲಿ, 'ಕ್ಲಿನಿಕಲ್ ಸೈಕೊಲೊಜಿಸ್ಟ್' ಆಗಿದ್ದಾರೆ. == ಸಲೋನಿಗೆ 'ಆಟೋಗ್ರಾಫ್' ಕೊಡಲು ಬಲು-ಆಸೆ == ಎಷ್ಟು ಜನ ಅವಳ ಪ್ರಿಯ ವೀಕ್ಷಕರು ಬಂದು ಕೇಳಿದರೂ 'ಆಟೊಗ್ರಾಫ್' ಕೊಡಲು ನಿರಾಕರಿಸುವುದಿಲ್ಲ. ಮೃದು ಸ್ವಭಾವದ ಸಲೋನಿ, ಹೆಚ್ಚುಮಾತಾಡಲು ಇಷ್ಟಪಡುವುದಿಲ್ಲ.ನಾಚಿಕೆಸ್ವಭಾವ. ಅವಳು, ಈಜುವುದು, ಸೈಕಲ್ ಹೊಡೆಯುವುದು, ಸ್ಕೇಟಿಂಗ್, ಬ್ಯಾಡ್ಮಿಂಟನ್ ಆಟಗಳಲ್ಲಿ ಆಸಕ್ತೆ. ತನ್ನ ಬಿಡುವಿನ ವೇಳೆಯಲ್ಲಿ ತಾನುನಟಿಸಿರುವ ಧಾರಾವಾಹಿಗಳನ್ನು ಮತ್ತೆ ತಿದ್ದುವುದು, ಸರಿಪಡಿಸುವುದು, ಮುಂತಾದ ಕೆಲಸಗಳಲ್ಲಿ ವ್ಯಸ್ತರಾಗಿರುತ್ತಾಳೆ. == 'ಹೊಸ ರಿಯಾಲಿಟಿ ಶೋ ಚಕ್ ಧೂಂ-ಧೂಂ' ನಲ್ಲಿ ಭಾಗವಹಿಸಿದ್ದಾಳೆ == 'ಕಲರ್ಸ್ ಟೆಲಿವಿಶನ್ ಶೋ', 'ಚೆಕ್ ಧೂಂ ಧೂಂ' ಎಂಬ ಹೊಸ ಸೀರಿಯಲ್ ನಲ್ಲಿ 'ಸಹ-ಹೋಸ್ಟ್' ಆಗಿ ಕಾರ್ಯನಿರ್ವಹಿಸುತ್ತಿದ್ದಾಳೆ. == ಸಂಪರ್ಕಿಸಲು ಬೇಕಾದ ಕೊಂಡಿಗಳು == ^ " ". 2009-06-21. ://..////50-58-77427.